ಆಗಸ್ಟ್ 07, 2026
ಬೆಂಗಳೂರು:
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು 10 ದಿನಗಳ ಕಾಲ ವಿಸ್ತರಿಸಲಾಗಿದೆ.
ಈ ಹಿಂದೆ ನಿಗದಿಯಾಗಿದ್ದ ಗಣತಿ ನಮೂನೆ ಡಿಜಿಟಲೀಕರಣ ಮತ್ತು ಎಎಸ್ಡಿಡಿಒ (ASDDO) ರೋಲ್ಬ್ಯಾಕ್ ಪ್ರಕ್ರಿಯೆಯು ಆಗಸ್ಟ್ 8ಕ್ಕೆ ಮುಗಿಯಬೇಕಿತ್ತು. ಆದರೆ ಈಗ ಈ ಅವಧಿಯನ್ನು ಆಗಸ್ಟ್ 17ರವರೆಗೆ ವಿಸ್ತರಿಸಲಾಗಿದೆ. ಎಎಸ್ಡಿಡಿಒ ರೋಲ್ಬ್ಯಾಕ್ ಅವಧಿಯನ್ನು ವಿಸ್ತರಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದವು. ರಾಜ್ಯದಲ್ಲಿ ಎಸ್ಐಆರ್ ಅವಧಿ ವಿಸ್ತರಣೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದಪ್ರಮುಖ ದಿನಾಂಕಗಳು:
ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 17ಕ್ಕೆ ಪ್ರಕಟವಾಗಬೇಕಿದ್ದ
ಕರಡು ಪಟ್ಟಿಯು ಆಗಸ್ಟ್ 24ಕ್ಕೆ ಪ್ರಕಟವಾಗಲಿದೆ.
ಕ್ಲೇಮು ಮತ್ತು ಆಕ್ಷೇಪಣೆ ಸಲ್ಲಿಕೆ: ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ (ಹಳೆಯ ದಿನಾಂಕ: ಆಗಸ್ಟ್ 17ರಿಂದ ಸೆಪ್ಟೆಂಬರ್ 16).
ಆಕ್ಷೇಪಣೆಗಳ ವಿಲೇವಾರಿ: ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ನಡೆಯಲಿದೆ (ಹಳೆಯ ದಿನಾಂಕ: ಆಗಸ್ಟ್ 17ರಿಂದ ಅಕ್ಟೋಬರ್ 15).
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್ 19ರ ಬದಲಾಗಿ ಅಕ್ಟೋಬರ್ 27ಕ್ಕೆ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.
📢 ಕರುನಾಡ ಬಲ ವಾಟ್ಸಾಪ್ ಗ್ರೂಪ್ಗೆ ಸೇರಲು ಕೆಳಗಿನ ಲಿಂಕ್ ಬಳಸಿ:
🔗 ಕರುನಾಡ ಬಲ WhatsApp Group ಗೆ ಸೇರಿ
https://chat.whatsapp.com/K4n2az7Kw6kIMsfbKLFIRb
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

