ನಮ್ಮ ಬಗ್ಗೆ (About Us)
ಕರುನಾಡ ಬಲ ನ್ಯೂಸ್ (Karunada Bala News) ಗೆ ಸುಸ್ವಾಗತ.
‘ಕರುನಾಡ ಬಲ ನ್ಯೂಸ್’ ನಾಡಿನ ನೆಲ-ಜಲ, ಸಾಹಿತ್ಯ, ಸಂಸ್ಕೃತಿ ಮತ್ತು ಜನಸಾಮಾನ್ಯರ ಬದುಕಿನ ನೈಜ ಚಿತ್ರಣವನ್ನು ಜಗತ್ತಿಗೆ ತಲುಪಿಸುವ ಬದ್ಧತೆಯುಳ್ಳ ಡಿಜಿಟಲ್ ಮಾಧ್ಯಮ ಸಂಸ್ಥೆಯಾಗಿದೆ. ಸಮಾಜದ ಮೂಲೆಮುಡಿಯಲ್ಲಿ ನಿಶಬ್ದವಾಗಿ ಉಳಿದುಹೋದ ಸತ್ಯಗಳಿಗೆ ಸ್ಪಷ್ಟ ಧ್ವನಿಯಾಗುವುದು, ಸಾರ್ವಜನಿಕರಲ್ಲಿ ವೈಚಾರಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವುದು ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೂಲಕ ಬದಲಾವಣೆಯ ಹಾದಿ ನಿರ್ಮಿಸುವುದೇ ನಮ್ಮ ಪ್ರಮುಖ ಧ್ಯೇಯ.
ನಮ್ಮ ಸಂಪಾದಕರ ಬಗ್ಗೆ (Editor Profile)
ಸಂಪಾದಕರು: ಶ್ರೀ ದೇವರಾಜ್ ಪದ್ಮಾಶಾಲಿ
ಶ್ರೀ ದೇವರಾಜ್ ಬಿ.ಕಾಮ್ ಅವರು ಅಖಿಲ ಕರ್ನಾಟಕ ಪದ್ಮಶಾಲಿ ಯೂತ್ ಆರ್ಗನೈಸೇಷನ್ ಸಂಸ್ಥೆಯ ಅಧ್ಯಕ್ಷರಾಗಿ ಪದ್ಮಶಾಲಿ ಸಮುದಾಯದ ಯುವಜನತೆಯನ್ನು ಸಂಘಟಿಸಿ, ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಮೂರು ವರ್ಷಗಳ ಸುದೀರ್ಘ ಸೇವಾ ಅನುಭವ ಹೊಂದಿರುವ ಇವರು, ಉಚಿತ ಕಾನೂನು ಸೇವಾ ಸಲಹೆಗಾರರಾಗಿ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ಉಚಿತ ಸಲಹೆಗಳನ್ನು ನೀಡುತ್ತಿರುವ ಬದ್ಧತೆಯುಳ್ಳ ಸಮಾಜ ಸೇವಕರಾಗಿದ್ದಾರೆ.
ವೃತ್ತಿಪರ
ಸಂಪಾದಕರ ಆಶಯ ( Editor's Vision)
"ಸಮಾಜದ ಮೂಲೆಮುಡಿಯಲ್ಲಿ ನಿಶಬ್ದವಾಗಿ ಉಳಿದುಹೋದ ಸತ್ಯಗಳಿಗೆ ಸ್ಪಷ್ಟ ಧ್ವನಿಯಾಗುವುದು, ಸಾರ್ವಜನಿಕರಲ್ಲಿ ವೈಚಾರಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವುದು ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೂಲಕ ಬದಲಾವಣೆಯ ಹಾದಿ ನಿರ್ಮಿಸುವುದೇ ನಮ್ಮ ಪ್ರಮುಖ ಧ್ಯೇಯ."
ನಾವು ಪ್ರಕಟಿಸುವ ವಿಷಯಗಳು
ರಾಜ್ಯ ಹಾಗೂ ರಾಷ್ಟ್ರೀಯ ಸುದ್ದಿ (State & National News): ದೇಶ-ವಿದೇಶ ಹಾಗೂ ರಾಜ್ಯದ ಪ್ರಮುಖ ವಿದ್ಯಮಾನಗಳು.
ಲೋಕಲ್ ನ್ಯೂಸ್ (Local News): ಸ್ಥಳೀಯ ಜನಪ್ರತಿನಿಧಿಗಳ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳು.
ತಂತ್ರಜ್ಞಾನ (Technology): ಮೊಬೈಲ್, ಆಟೋಮೊಬೈಲ್ ಮತ್ತು ಗ್ಯಾಜೆಟ್ಗಳ ಕುರಿತಾದ ಅಪ್ಡೇಟ್ಗಳು.
ವಿಶೇಷ ಲೇಖನಗಳು (Articles): ಸಮಾಜ, ಕಾನೂನು ಅರಿವು, ಶಿಕ್ಷಣ ಹಾಗೂ ಆರ್ಥಿಕ ಸಲಹೆಗಳ ಕುರಿತಾದ ವಿಶ್ಲೇಷಣೆಗಳು.
ಸಂಪರ್ಕಿಸಿ
ನಮ್ಮ ಸುದ್ದಿಗಳು ಅಥವಾ ಲೇಖನಗಳ ಕುರಿತು ಯಾವುದೇ ಸಲಹೆ-ಸೂಚನೆಗಳಿದ್ದಲ್ಲಿ ಅಥವಾ ಜಾಹೀರಾತು ಪ್ರಕಟಣೆಗಾಗಿ ನಮ್ಮನ್ನು ಸಂಪರ್ಕಿಸಬಹುದು:
ಇಮೇಲ್: nishabdhadhwani@gmail.com
ದೂರವಾಣಿ: +91 88845 22410
ವಿಳಾಸ: ಗಂಗಮ್ಮ ಸರ್ಕಲ್, ಬೆಂಗಳೂರು ನಾರ್ತ್, ಕರ್ನಾಟಕ
ವೆಬ್ಸೈಟ್:
www.karunadabalanews.online
