ಆಗಸ್ಟ್ 08, 2026
ಬೆಂಗಳೂರು ಅಭಿವೃದ್ಧಿ ಕುರಿತು ಆಗಸ್ಟ್ 24 ಕ್ಕೆ 'GBA ಸಂವಾದ': ಬಿಬಿಎಂಪಿಯ 9 ಮಾಜಿ ಮೇಯರ್ಗಳು ಭಾಗಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ, ನಾಗರಿಕರ ಜ್ವಲಂತ ಸಮಸ್ಯೆಗಳು ಹಾಗೂ ಭವಿಷ್ಯದ ಬೆಂಗಳೂರನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ 'GBA ಸಂವಾದ' (ನಾಗರಿಕ ಸಂವಾದ ಕಾರ್ಯಕ್ರಮ) ವನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಬನಶಂಕರಿಯಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಬಿಬಿಎಂಪಿಯ 9 ಮಾಜಿ ಮೇಯರ್ಗಳು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುತ್ತಿರುವುದು ಈ ಸಂವಾದದ ಪ್ರಮುಖ ಆಕರ್ಷಣೆಯಾಗಿದೆ.
ನಾಗರಿಕರೊಂದಿಗೆ ಮುಕ್ತ ಸಂವಾದ:
ನಗರದ ಮೂಲಸೌಕರ್ಯ, ಕಸದ ಸಮಸ್ಯೆ, ರಸ್ತೆಗಳು, ಸಂಚಾರ ದಟ್ಟಣೆ ಸೇರಿದಂತೆ ಸಾರ್ವಜನಿಕರನ್ನು ಕಾಡುತ್ತಿರುವ ಹತ್ತಾರು ವಿಷಯಗಳ ಬಗ್ಗೆ ನಾಗರಿಕರೊಂದಿಗೆ ಮುಕ್ತವಾಗಿ ಚರ್ಚಿಸಲು ಈ ವೇದಿಕೆ ಸಾಕ್ಷಿಯಾಗಲಿದೆ. ಸಾರ್ವಜನಿಕರು ನೇರವಾಗಿ ಮಾಜಿ ಮೇಯರ್ಗಳೊಂದಿಗೆ ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: 24-08-2026 (ಸೋಮವಾರ)
ಸಮಯ: ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ
ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಬೆಂಗಳೂರು.
ಯಾರೆಲ್ಲಾ ಭಾಗವಹಿಸಬಹುದು?
ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಆಸಕ್ತಿಯಿರುವ ಎಲ್ಲಾ ನಾಗರಿಕರು, ಸಮಾಜ ಸೇವಕರು, ನಾಗರಿಕ ನಾಯಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ:
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ತಕ್ಷಣವೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಸಂಪರ್ಕಿಸಿ: 7975458542 (GBA DESK)
- ಕರುನಾಡು ಬಲ ನ್ಯೂಸ್ ವೆಬ್ ಡೆಸ್ಕ
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

