ಆಗಸ್ಟ್ 10, 2026
ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority - GBA) ಮಹತ್ವದ ಹಾಗೂ ಕಡಕ್ ಆದೇಶವೊಂದನ್ನು ಹೊರಡಿಸಿದೆ. ಆಗಸ್ಟ್-2026ರ ಅವಧಿಯಲ್ಲಿ ಹಮ್ಮಿಕೊಳ್ಳಲಾಗಿರುವ "ತ್ಯಾಜ್ಯ ಮುಕ್ತ" (Freedom from Waste) ಅಭಿಯಾನದ ಭಾಗವಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಘನತ್ಯಾಜ್ಯ ನಿರ್ವಹಣೆ ಬೈ-ಲಾ 2020ರ ನಿಯಮ 18(1)(b) ಪ್ರಕಾರ, ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಲಿ ನಿವೇಶನಗಳ (Vacant Sites) ಮಾಲೀಕರು ತಮ್ಮ ಸೈಟ್ಗಳನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡುವುದು ಕಡ್ಡಾಯವಾಗಿದೆ.
ಆಗಸ್ಟ್ 15 ಕೊನೆಯ ದಿನಾಂಕ!
ಜಿಬಿಎ ಮುಖ್ಯ ಆಯುಕ್ತರು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯ ಪ್ರಕಾರ:
ಖಾಲಿ ಸೈಟ್ಗಳಲ್ಲಿ ಸಂಗ್ರಹವಾಗಿರುವ ಕಸ, ತ್ಯಾಜ್ಯ ಮತ್ತು ಕಟ್ಟಡದ ಅವಶೇಷಗಳನ್ನು (Debris) ಮಾಲೀಕರು ಆಗಸ್ಟ್ 15, 2026ರ ಒಳಗಾಗಿ ಕಡ್ಡಾಯವಾಗಿ ತೆರವುಗೊಳಿಸಬೇಕು.
ಈ ತ್ಯಾಜ್ಯವನ್ನು ಮುನ್ಸಿಪಲ್ ಕಾರ್ಪೊರೇಷನ್ ನಿಗದಿಪಡಿಸಿದ ಜಾಗದಲ್ಲೇ ವಿಲೇವಾರಿ ಮಾಡಬೇಕು. ಸ್ವಚ್ಛಗೊಳಿಸಲು ಕಷ್ಟವಾಗುವ ಸೈಟ್ ಮಾಲೀಕರು ಮಹಾನಗರ ಪಾಲಿಕೆಯ ಅಧಿಕೃತ ಏಜೆನ್ಸಿಗಳ ಸಹಾಯವನ್ನೂ ಪಡೆದುಕೊಳ್ಳಬಹುದು.
ತಪ್ಪಿದರೆ ಪಾಲಿಕೆಯಿಂದಲೇ ಕ್ಲೀನಿಂಗ್: ತೆರಿಗೆ ಜೊತೆ ವಸೂಲಾಗಲಿದೆ ಭಾರಿ ವೆಚ್ಚ!
ಒಂದು ವೇಳೆ ಆಗಸ್ಟ್ 15ರ ಒಳಗಾಗಿ ಮಾಲೀಕರು ಸೈಟ್ ಸ್ವಚ್ಛಗೊಳಿಸದಿದ್ದರೆ, ಮುನ್ಸಿಪಲ್ ಕಾರ್ಪೊರೇಷನ್ ಸ್ವತಃ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ. ಆದರೆ, ಅದಕ್ಕೆ ತಗಲುವ ಭಾರಿ ಮೊತ್ತದ ವೆಚ್ಚವನ್ನು ಗ್ರೇಟರ್ ಬೆಂಗಳೂರು ಅಡ್ಮಿನಿಸ್ಟ್ರೇಷನ್ ಆಕ್ಟ್ 2024ರ ಸೆಕ್ಷನ್ 285(2) ಅನ್ವಯ ಆಸ್ತಿ ತೆರಿಗೆಯ (Property Tax) ಜೊತೆಗೆ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

