- ವಿವಾಹಿತ ದಂಪತಿಗಳಿಗೆ (ಪ್ರತ್ಯೇಕ ಕುಟುಂಬ): ಪತಿ-ಪತ್ನಿ ಪ್ರತ್ಯೇಕವಾಗಿ (ಸ್ವಾಯತ್ತ ಕುಟುಂಬದಂತೆ) ವಾಸಿಸುತ್ತಿದ್ದರೆ, ಪತ್ನಿ ಅರ್ಜಿ ಸಲ್ಲಿಸಿದರೆ ಪತಿಯ ಆದಾಯವನ್ನು ಹಾಗೂ ಪತಿ ಅರ್ಜಿ ಸಲ್ಲಿಸಿದರೆ ಪತ್ನಿಯ ಆದಾಯವನ್ನು ಒಟ್ಟುಗೂಡಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ.
- ಅವಿಭಕ್ತ ಕುಟುಂಬಗಳಿಗೆ: ಅರ್ಜಿದಾರರು ಅವಿಭಕ್ತ ಕುಟುಂಬದಲ್ಲಿದ್ದರೆ, ಅವರ ಸ್ವಂತ ಆದಾಯದ ಜೊತೆಗೆ ಇಡೀ ಕುಟುಂಬದ ಆದಾಯವನ್ನು ಒಟ್ಟುಗೂಡಿಸಿ ಪರಿಗಣಿಸಲಾಗುತ್ತದೆ.
- ಅನ್ವಯವಾಗುವ ವರ್ಗಗಳು: ಈ ಆದೇಶವು ಹಿಂದುಳಿದ ವರ್ಗಗಳ ಪ್ರವರ್ಗ-2A, 2B, 3A, ಮತ್ತು 3B ಸಮುದಾಯಗಳಿಗೆ ನೇರವಾಗಿ ಅನ್ವಯವಾಗಲಿದೆ.
- ಹಳೆಯ ಆದೇಶ ರದ್ದು: 1988ರ ಡಿಸೆಂಬರ್ 12ರಂದು ಹೊರಡಿಸಲಾಗಿದ್ದ ಹಳೆಯ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸೆಪ್ಟೆಂಬರ್ 02, 2026
ಕರುನಾಡ ಬಲ ನ್ಯೂಸ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಗೆ ಹೊಸ ಮಾನದಂಡ: ರಾಜ್ಯ ಸರ್ಕಾರದಿಂದ ಪರಿಷ್ಕೃತ ಸುತ್ತೋಲೆ ಬಿಡುಗಡೆ
ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವಾಗ ಆದಾಯ ಪರಿಗಣಿಸುವ ಕುರಿತು ರಾಜ್ಯ ಸರ್ಕಾರವು ಹೊಸ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ. ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಿದ್ದು, ಶೈಕ್ಷಣಿಕ ಹಾಗೂ ನೇಮಕಾತಿ ಉದ್ದೇಶಗಳಿಗಾಗಿ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಪ್ರಮುಖ ಮುಖ್ಯಾಂಶಗಳು:
ಇನ್ಮುಂದೆ ಶೈಕ್ಷಣಿಕ ಪ್ರವೇಶ ಮತ್ತು ಉದ್ಯೋಗ ನೇಮಕಾತಿಗಾಗಿ ಜಾತಿ-ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ತಹಸೀಲ್ದಾರ್ ಹಾಗೂ ಸಿಬ್ಬಂದಿ ಈ ಪರಿಷ್ಕೃತ ಮಾನದಂಡಗಳನ್ನೇ ಪರಿಗಣಿಸಲಿದ್ದಾರೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

