ಆಗಸ್ಟ್ 09, 2026
ಬೆಂಗಳೂರು: ರಾಜಧಾನಿಯ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಬಸವನಗುಡಿಯ ಶ್ರೀ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ನಾಳೆ (ಆಗಸ್ಟ್ 10, ಸೋಮವಾರ) ವಿಶೇಷ ಪ್ರದೋಷ ಪೂಜಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಶಿವನ ಪರಮ ಭಕ್ತನಾದ ನಂದೀಶ್ವರನಿಗೆ ಪ್ರದೋಷ ಕಾಲದಲ್ಲಿ ಮಾಡುವ ಪೂಜೆಗೆ ವಿಶೇಷ ಮಹತ್ವವಿದ್ದು, ಈ ಹಿನ್ನೆಲೆಯಲ್ಲಿ ನಾಳೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಮಂಡಳಿ ವಿನಂತಿಸಿದೆ.
ಪೂಜಾ ಕಾರ್ಯಕ್ರಮಗಳ ವಿವರ:
ದಿನಾಂಕ: ಆಗಸ್ಟ್ 10, ಸೋಮವಾರ
ವಿಶೇಷ ಪ್ರದೋಷ ಪೂಜೆ: ಸಂಜೆ 4:30 ಕ್ಕೆ
ಮಹಾ ಮಂಗಳಾರತಿ: ಸಂಜೆ 6:30 ಕ್ಕೆ
ವಿಶೇಷತೆ: ಪೂಜಾ ಕಾರ್ಯಕ್ರಮಗಳ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಸ್ಥಳ: ಶ್ರೀ ದೊಡ್ಡ ಬಸವಣ್ಣ ದೇವಸ್ಥಾನ, ಬಸವನಗುಡಿ, ಬೆಂಗಳೂರು.
ಪ್ರದೋಷ ಪೂಜೆಯ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ದೊಡ್ಡ ಬಸವಣ್ಣನಿಗೆ ವಿಶೇಷ ಅಲಂಕಾರ ಹಾಗೂ ಪೂಜೆಗಳನ್ನು ನೆರವೇರಿಸಲಾಗುತ್ತಿದ್ದು, ಭಕ್ತ ಸಾಗರ ಹರಿದುಬರುವ ನಿರೀಕ್ಷೆಯಿದೆ.
- ವಿದ್ಯಾಶಂಕರ್ ಹುಳಿಕುಂಟೆ ಕರುನಾಡ ಬಲ ನ್ಯೂಸ್, ಬೆಂಗಳೂರು.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

