ಆಗಸ್ಟ್ 03, 2026
30 ವರ್ಷಗಳ ಹಿರಿಯ ಸಂಗೀತ ಸಾಧಕ, ‘ಡಾ. ಇನ್ ಲೈಟ್ ಮ್ಯೂಸಿಕ್’ ಗಾಯಕ ಭಾಸ್ಕರ್ ಎಸ್. ಅವರ ಸಾಂಸ್ಕೃತಿಕ ಪಯಣ ಹಾಗೂ ಪಡೆದ ಬಿರುದುಗಳ ಪೂರ್ಣ ವಿವರ
ಬೆಂಗಳೂರು:
ಕನ್ನಡ ನಾಡಿನ ಸುಗಮ ಸಂಗೀತ, ಭಕ್ತಿ ಸಂಗೀತ, ದಾಸವಾಣಿ, ಜನಪದ ಹಾಗೂ ಚಲನಚಿತ್ರ ಗೀತೆಗಳ ಗಾಯನ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಗಾಯಕ ಭಾಸ್ಕರ್ ಎಸ್. ಅವರು ತಮ್ಮ ಅಪಾರ ಕಲಾ ಸೇವೆಯಿಂದ ನಾಡಿನಾದ್ಯಂತ ಸನ್ಮಾನಿತರಾಗಿದ್ದಾರೆ.
ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರೂ, 'ಡಾ. ಇನ್ ಲೈಟ್ ಮ್ಯೂಸಿಕ್' ಎಂಬ ಅಪರೂಪದ ಗೌರವಕ್ಕೆ ಪಾತ್ರರಾಗಿರುವ ಇವರು, ತಮ್ಮ ಸಾಧನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಸಂಗೀತದ ಆರಂಭಿಕ ದಿನಗಳು ಮತ್ತು ಗುರುಗಳು
ಭಾಸ್ಕರ್ ಎಸ್. ಅವರು ತಮ್ಮ 6ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಹೆಜ್ಜೆಯಿಟ್ಟವರು. ಇವರ ತಂದೆಯಾದ ವಿದ್ವಾನ್ ಎಸ್. ವಿ. ಶ್ರೀನಿವಾಸ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಅವರಿಂದಲೇ ಸಂಗೀತವನ್ನು ಕಲಿತು, ಅವರನ್ನೇ ತಮ್ಮ ಪರಮ ಗುರುಗಳಾಗಿ ಸ್ವೀಕರಿಸಿದರು. ಶಾಲಾ-ಕಾಲೇಜುಗಳಲ್ಲಿ ಓದುವ ದಿನಗಳಲ್ಲೇ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳಲ್ಲಿ ಭಕ್ತಿಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳನ್ನು ಹಾಡಿ ಪ್ರಶಸ್ತಿಗಳನ್ನು ಗಳಿಸಿದ್ದರು.
ಕಲಾ ವೃಂದ ಮತ್ತು ವೇದಿಕೆ ಕಾರ್ಯಕ್ರಮಗಳು
ತಮ್ಮ ತಂದೆಯವರ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾಸ್ಕರ್ ಅವರು ಸ್ವತಃ ಒಂದು ತಂಡವನ್ನು (ವೃಂದ) ರಚಿಸಿಕೊಂಡರು. ಅದರ ಮೂಲಕ ನಾಡಿನಾದ್ಯಂತ ಸಾವಿರಾರು ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಪ್ರಮುಖ ಧಾರ್ಮಿಕ ಸಮಾರಂಭಗಳು: ಗಣೇಶೋತ್ಸವ, ರಾಮೋತ್ಸವ, ಶಿವರಾತ್ರಿ, ನವರಾತ್ರಿ, ಹನುಮ ಜಯಂತಿ, ಶ್ರೀ ಗುರುರಾಯರ ಆರಾಧನೆ, ಶ್ರೀ ಪುರಂದರದಾಸರ ಆರಾಧನೆ, ಕನಕದಾಸರ ಆರಾಧನೆ ಹಾಗೂ ಕೈವಾರ ತಾತಯ್ಯನವರ ಆರಾಧನೆಗಳಲ್ಲಿ ಗಾಯನ ಸೇವೆ ಸಲ್ಲಿಸಿದ್ದಾರೆ.
ಸರ್ಕಾರಿ ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಕಾರ್ಯಕ್ರಮ, ವಾರ್ತಾ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಬಿಬಿಎಂಪಿ ಕಾರ್ಯಕ್ರಮಗಳು ಹಾಗೂ ದೆಹಲಿ ಕನ್ನಡ ಸಂಘಗಳಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಕೋವಿಡ್ ಸಮಯದ ಜಾಗೃತಿ ಹಾಡು
ಕೋವಿಡ್ ಮಹಾಮಾರಿ ಕಷ್ಟಕರವಾಗಿದ್ದ ಸಮಯದಲ್ಲಿ, ಸಾರ್ವಜನಿಕ ಜಾಗೃತಿಗಾಗಿ ಪ್ರಥಮವಾಗಿ ತಾವೇ ಸ್ವತಃ ಗೀತೆ ರಚಿಸಿ, ರಾಗ ಸಂಯೋಜಿಸಿ ಹಾಡಿದ ‘ಕೊರೋನಾ ಹಾಡು’ ಜನಪ್ರಿಯವಾಯಿತು. ತದನಂತರ ಇತರ ಸಾಹಿತಿಗಳ ಹಾಡುಗಳಿಗೂ ರಾಗ ಸಂಯೋಜನೆ ಮಾಡಿ ಪ್ರಸಾರ ಮಾಡಿದ್ದರು. ಪ್ರಸ್ತುತ ಇವರ ಹಾಡುಗಳು ಯೂಟ್ಯೂಬ್ ಮತ್ತು ಫೇಸ್ಬುಕ್ ಮೂಲಕ ದೇಶ-ವಿದೇಶಗಳಲ್ಲೂ ಸದ್ದು ಮಾಡುತ್ತಿವೆ.
180 ಸನ್ಮಾನಗಳು & 35 ಪ್ರಮುಖ ಬಿರುದು-ಪ್ರಶಸ್ತಿಗಳ ಪಟ್ಟಿ
ಭಾಸ್ಕರ್ ಎಸ್. ಅವರಿಗೆ ವಿವಿಧ ಸಂಘ-ಸಂಸ್ಥೆಗಳು ನೀಡಿದ 180ಕ್ಕೂ ಹೆಚ್ಚು ಸನ್ಮಾನಗಳು ಹಾಗೂ 35 ಬಿರುದುಗಳ ಪೂರ್ಣ ಪಟ್ಟಿ ಇಲ್ಲಿದೆ:
ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ-2024
ನೋಬೆಲ್ ಮ್ಯಾನ್ - ಪ್ರಶಸ್ತಿ (ದೆಹಲಿಯಿಂದ)
ಅಂತರರಾಷ್ಟ್ರೀಯ ಇಂಡಿಯನ್ ಐಕಾನ್ - ಪ್ರಶಸ್ತಿ
ಭಾರತ ಸೇವಾ ರತ್ನ - ಪ್ರಶಸ್ತಿ 2023
ಸಂಗೀತ ಸಾರ್ವಭೌಮ - ಪ್ರಶಸ್ತಿ
ಕರ್ನಾಟಕ ಗಾನ ಭೂಷಣ - ಪ್ರಶಸ್ತಿ
ಡಾ. ಪುನೀತ್ ರಾಜಕುಮಾರ್ ಸ್ಮೃತಿ 4.12.2022 - ಪ್ರಶಸ್ತಿ
ಭಜನಾ ರತ್ನ - ಪ್ರಶಸ್ತಿ
ಕನ್ನಡ ಸೇವಾ ರತ್ನ - ಪ್ರಶಸ್ತಿ
ಸ್ನೇಹ ರತ್ನ - ಪ್ರಶಸ್ತಿ
ಗಾನ ಕಲಾಶ್ರೀ - ಪ್ರಶಸ್ತಿ
ಸಂಗೀತ ರತ್ನ ಶ್ರೀ - ಪ್ರಶಸ್ತಿ
ಅವಧೂತ ಸೇವಾ ರತ್ನ - ಪ್ರಶಸ್ತಿ
ಕನ್ನಡ ರಾಜ್ಯೋತ್ಸವ - ಪ್ರಶಸ್ತಿ
ಪರಮೇಶ್ವರ ಪುಲಿಕೇಶಿ - ಪ್ರಶಸ್ತಿ
ಆರ್. ವಿ. ದೇವರಾಜ್ ಸೇವಾ ಪ್ರತಿಷ್ಠಾನ - ಪ್ರಶಸ್ತಿ
ಸಂಗೀತ - ಗಾನ ಬ್ರಹ್ಮ - ಪ್ರಶಸ್ತಿ
ಸಂಗೀತ ಗಾನ ತಿಲಕ - ಪ್ರಶಸ್ತಿ
ಸದ್ಗುರು ಶ್ರೀ ಯೋಗಿ ನಾರಾಯಣ ಯತೀಂದ್ರ - ಪ್ರಶಸ್ತಿ
ಸಂಗೀತ ಗಾನ ಸೇವಾ ರತ್ನ - ಪ್ರಶಸ್ತಿ
ಕನ್ನಡ ಮಾಣಿಕ್ಯ ರತ್ನ - ಪ್ರಶಸ್ತಿ
ಸಂಪದ ಪ್ರತಿಷ್ಠಾನ ಗಾಯನ ಪ್ರಶಸ್ತಿ
ಶ್ರೀ ಶಿವಕುಮಾರ್ ಸ್ವಾಮಿಗಳ - ಕಾಯಕ ರತ್ನ ಪ್ರಶಸ್ತಿ
ಸಂಗೀತ ಗಾನ ಚೂಡಾಮಣಿ - ಪ್ರಶಸ್ತಿ
ರಾಷ್ಟ್ರೀಯ ಬಸವಶ್ರೀ - ಪ್ರಶಸ್ತಿ
ಭಾರತ ಸೇವಾ ರತ್ನ - ಪ್ರಶಸ್ತಿ - 2024
ಕನ್ನಡ ಜಾನಪದ ಗಾಯಕ ಪ್ರಶಸ್ತಿ - 2025
ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ - 2025
ಕರ್ನಾಟಕ ರತ್ನ - ರಾಜ್ಯ ಪ್ರಶಸ್ತಿ - 2025
ಕನ್ನಡ ಫಿಲಂ ಚೇಂಬರ್ ಸಂಸ್ಥೆಯ "ಸಂಗೀತ ಸೇವಾ ರತ್ನ" ರಾಜ್ಯ ಪ್ರಶಸ್ತಿ - 2025
ಪ್ರತಿಭಾ ಶೋಧನಾ ಮತ್ತು ಸಾಧನೆಯ ಬಸವನಗುಡಿ ವಿಧಾನಸಭಾ ಕ್ಷೇತ್ರ-2025ರ ಪ್ರಶಸ್ತಿ
ಗಂಧದ ಗುಡಿ ರಾಜ್ಯೋತ್ಸವ ಪ್ರಶಸ್ತಿ - 30.11.2025
ಪವರ್ ಸ್ಟಾರ್ ಡಾ: ಪುನೀತ್ ರಾಜಕುಮಾರ್ ಪ್ರಶಸ್ತಿ - 15.3.2026
ಗಾನ ಗಂಧರ್ವ ಡಾ: ರಾಜಕುಮಾರ್ ಪ್ರಶಸ್ತಿ - 23.5.2026
ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ - 21/6/2026
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

