- ಕಾನೂನು ನೆರವು ಹಾಗೂ ಜಾಗೃತಿ: ಹಿರಿಯ ನಾಗರಿಕರ ಸಹಾಯವಾಣಿ, ಹಿರಿಯ ನಾಗರಿಕರ ಕಾಯ್ದೆ, ಉಚಿತ ಕಾನೂನು ನೆರವು, ಕಲ್ಯಾಣ ಯೋಜನೆಗಳು ಹಾಗೂ ಮೈಂಟೆನೆನ್ಸ್ ಟ್ರಿಬ್ಯೂನಲ್ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು.
- ಒತ್ತಡ ನಿರ್ವಹಣೆ: ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಭಾಗವಾಗಿ ನಿರ್ದಿಷ್ಟ ಚಟುವಟಿಕೆಗಳು ಮತ್ತು ದಿನನಿತ್ಯದ ಒತ್ತಡ ನಿರ್ವಹಣಾ ತರಬೇತಿಯನ್ನು ಆಯೋಜಿಸಲಾಗಿತ್ತು.
- ಪ್ರಮುಖರ ಉಪಸ್ಥಿತಿ: ಶ್ರೀ ಸಾಯಿ ಪ್ರಶಾಂತಿ ಹೋಮ್ ಸಂಸ್ಥಾಪಕರಾದ ಶ್ರೀ ಕಿರಣ್, EHL ಸಂಸ್ಥೆಯಿಂದ ಮಿಸ್ ಉಮಾದೇವಿ, NMT ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ರೆಬೆಕ್ಕಾ, DLSA ನಿಂದ PLV ಶ್ರೀ ವಿದ್ಯಾಶಂಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸೆಪ್ಟೆಂಬರ್ 09, 2026
ಕರುನಾಡ ಬಲ ನ್ಯೂಸ್
ಅಟ್ಟೂರಿನ ಶ್ರೀ ಸಾಯಿ ಪ್ರಶಾಂತಿ ಹೋಮ್ನಲ್ಲಿ ಹಿರಿಯ ನಾಗರಿಕರ ಹಕ್ಕುಗಳು ಹಾಗೂ ಮಾನಸಿಕ ಆರೋಗ್ಯ ಕಾರ್ಯಾಗಾರ
ಬೆಂಗಳೂರು (ಸೆ. 09): ಅಟ್ಟೂರಿನಲ್ಲಿರುವ ಶ್ರೀ ಸಾಯಿ ಪ್ರಶಾಂತಿ ಹೋಮ್ನಲ್ಲಿ ಹಿರಿಯ ನಾಗರಿಕರ ಹಕ್ಕುಗಳು, ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮದ ಕುರಿತು ವಿಶೇಷ ಜಾಗೃತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿಟಿ ಸಿವಿಲ್ ಕೋರ್ಟ್ ಕಾಂಪ್ಲೆಕ್ಸ್ನಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA), ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ (NMT) ಹಾಗೂ ಪೊಲೀಸ್ ಆಯುಕ್ತರ ಕಚೇರಿಯ ಹಿರಿಯ ಸಹಾಯವಾಣಿ (EHL) ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಮುಖ್ಯಾಂಶಗಳು:
NMT, EHL ಮತ್ತು DLSA ಸಂಸ್ಥೆಗಳ ತ್ರಿವೇಣಿ ಸಂಗಮದಂತೆ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಿರಿಯರಿಗೆ ಅತ್ಯಂತ ಉಪಯುಕ್ತ ಮಾಹಿತಿ ನೀಡಿದರು.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

