ಆಗಸ್ಟ್ 06, 2026
ಮೈಸೂರು:
ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರದ "ಅಂಧ ಹಾಗೂ ಶ್ರವಣದೋಷವುಳ್ಳ ಶಿಕ್ಷಕರ ಸರ್ಕಾರಿ ತರಬೇತಿ ಕೇಂದ್ರ, ತಿಲಕ್ ನಗರ, ಮೈಸೂರು" ಇಲ್ಲಿ 2026-27ನೇ ಶೈಕ್ಷಣಿಕ ಸಾಲಿನ 2 ವರ್ಷದ ಡಿಪ್ಲೊಮಾ ಕೋರ್ಸ್ಗಳ (2026-2027 ಬ್ಯಾಚ್) ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಧಾರವಾಡ / ಮೈಸೂರು ಕೇಂದ್ರದಲ್ಲಿ ಲಭ್ಯವಿರುವ ಡಿಪ್ಲೊಮಾ ಕೋರ್ಸ್ಗಳು:
ವಿಶೇಷ ಶಿಕ್ಷಣದಲ್ಲಿ ಶ್ರವಣದೋಷ (Diploma in Special Education - HI)
ವಿಶೇಷ ಶಿಕ್ಷಣದಲ್ಲಿ ದೃಷ್ಟಿ ದೋಷ (Diploma in Special Education - VI)
ಪ್ರಮುಖ ದಿನಾಂಕಗಳು:
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ದಿನಾಂಕಗಳ ವಿವರ ಈ ಕೆಳಗಿನಂತಿದೆ:
ಕ್ರಮ ಸಂಖ್ಯೆ ವಿವರ ದಿನಾಂಕ
1 ಪ್ರವೇಶ ಅಧಿಸೂಚನೆ ಪ್ರಕಟಣೆ 22 ಜುಲೈ, 2026
2 ಆನ್ಲೈನ್ ನೋಂದಣಿ ಆರಂಭ 05 ಆಗಸ್ಟ್, 2026
3 ಆನ್ಲೈನ್ ನೋಂದಣಿಗೆ ಕೊನೆಯ ದಿನಾಂಕ 24 ಆಗಸ್ಟ್, 2026
4 ಪ್ರಥಮ ಸುತ್ತಿನ ಮೆರಿಟ್ ಪಟ್ಟಿ (TTE-wise) ಪ್ರಕಟಣೆ 26 ಆಗಸ್ಟ್, 2026
5 ಪ್ರಥಮ ಸುತ್ತಿನ ಕೌನ್ಸೆಲಿಂಗ್ ಮತ್ತು ಪ್ರವೇಶ ದಿನಾಂಕ 29 ಆಗಸ್ಟ್ - 03 ಸೆಪ್ಟೆಂಬರ್, 2026
6 ದ್ವಿತೀಯ ಸುತ್ತಿನ ಮೆರಿಟ್ ಪಟ್ಟಿ ಪ್ರಕಟಣೆ 05 ಸೆಪ್ಟೆಂಬರ್, 2026
7 ದ್ವಿತೀಯ ಸುತ್ತಿನ ಕೌನ್ಸೆಲಿಂಗ್ ಮತ್ತು ಪ್ರವೇಶ ದಿನಾಂಕ 08 - 11 ಸೆಪ್ಟೆಂಬರ್, 2026
8 ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ 15 ಸೆಪ್ಟೆಂಬರ್, 2026
9 ತರಗತಿಗಳ ಪ್ರಾರಂಭ 18 ಸೆಪ್ಟೆಂಬರ್, 2026
ನೋಂದಣಿ ಶುಲ್ಕ:
ಸಾಮಾನ್ಯ / ಇತರ ಹಿಂದುಳಿದ ವರ್ಗಗಳು (OBC): ₹ 500/-
SC / ST / PwD (ವಿಶೇಷ ಚೇತನರು): ₹ 350/-
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅಧಿಕೃತ ವೆಬ್ಸೈಟ್ https://nber-rehabcouncil.gov.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ: ಪ್ರವೇಶ ಪ್ರಕ್ರಿಯೆಯ ಅರ್ಹತಾ ನಿಯಮಗಳು, ಶುಲ್ಕದ ಸಂಪೂರ್ಣ ವಿವರ ಹಾಗೂ ಇತರೆ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಸ್ತುತ ಪೋರ್ಟಲ್ ಅಥವಾ ಪ್ರಕಟಣೆಯಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
- ಬ್ಯೂರೋ ರಿಪೋರ್ಟ್, ಕರುನಾಡ ಬಲ ನ್ಯೂಸ್.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

