ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಪೂರ್ವಭಾವಿ ಪರೀಕ್ಷೆಯನ್ನು 2026ರ ನವೆಂಬರ್ 15 ರಂದು ನಡೆಸಲು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.
ಹುದ್ದೆಗಳ ವಿವರ ಹಾಗೂ ವರ್ಗೀಕರಣ
ಒಟ್ಟು 319 ಹುದ್ದೆಗಳಲ್ಲಿ ಗ್ರೂಪ್ 'ಎ' ವಿಭಾಗದ 117 ಹುದ್ದೆಗಳು ಹಾಗೂ ಗ್ರೂಪ್ 'ಬಿ' ವಿಭಾಗದ 202 ಹುದ್ದೆಗಳು ಸೇರಿವೆ. ಇವುಗಳಲ್ಲಿ ಉಳಿಕೆ ಮೂಲ ವೃಂದಕ್ಕೆ (RPC) 297 ಮತ್ತು ಕಲ್ಯಾಣ ಕರ್ನಾಟಕ (HK) ವೃಂದಕ್ಕೆ 22 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
1. ಗ್ರೂಪ್ 'ಎ' ಹುದ್ದೆಗಳು (ಒಟ್ಟು 117):
ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ - DPAR): 39 ಹುದ್ದೆಗಳು (RPC- 36, HK- 3)
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು: 50 ಹುದ್ದೆಗಳು (RPC)
ಸಹಾಯಕ ನಿರ್ದೇಶಕರು (ಖಜಾನೆ ಇಲಾಖೆ): 02 ಹುದ್ದೆಗಳು (RPC)
ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ (RDPR): 15 ಹುದ್ದೆಗಳು (RPC- 13, HK- 2)
ಸಹಾಯಕ ನಿರ್ದೇಶಕರು ಗ್ರೇಡ್-1 (ಸಮಾಜ ಕಲ್ಯಾಣ ಇಲಾಖೆ): 11 ಹುದ್ದೆಗಳು (RPC)
2. ಗ್ರೂಪ್ 'ಬಿ' ಹುದ್ದೆಗಳು (ಒಟ್ಟು 202):
ವಾಣಿಜ್ಯ ತೆರಿಗೆ ಅಧಿಕಾರಿ: 74 ಹುದ್ದೆಗಳು (RPC)
ತಹಶೀಲ್ದಾರ್ ಗ್ರೇಡ್-2: 25 ಹುದ್ದೆಗಳು (RPC- 18, HK- 7)
ಸಹಕಾರ ಸಂಘಗಳ ಸಹಾಯಕ ನಿಬಂಧಕರು: 21 ಹುದ್ದೆಗಳು (RPC- 19, HK- 2)
ಮುಖ್ಯಾಧಿಕಾರಿ ಗ್ರೇಡ್-1 (ನಗರಾಭಿವೃದ್ಧಿ ಇಲಾಖೆ): 20 ಹುದ್ದೆಗಳು (RPC- 18, HK- 2)
ಸಹಾಯಕ ಖಜಾನಾಧಿಕಾರಿ: 12 ಹುದ್ದೆಗಳು (RPC)
ಸಹಾಯಕ ನಿರ್ದೇಶಕರು (ಕೃಷಿ ಮಾರಾಟ ಇಲಾಖೆ): 12 ಹುದ್ದೆಗಳು (RPC- 10, HK- 2)
ಸಹಾಯಕ ನಿರ್ದೇಶಕರು ಗ್ರೇಡ್-2 (ಸಮಾಜ ಕಲ್ಯಾಣ ಇಲಾಖೆ): 11 ಹುದ್ದೆಗಳು (RPC)
ಸಹಾಯಕ ಅಧೀಕ್ಷಕರು (ಕಾರಾಗೃಹ ಇಲಾಖೆ): 06 ಹುದ್ದೆಗಳು (RPC- 5, HK- 1)
ಅಬಕಾರಿ ಉಪ ಅಧೀಕ್ಷಕರು: 05 ಹುದ್ದೆಗಳು (RPC)
ಶಾಖಾಧಿಕಾರಿ (ಸರ್ಕಾರದ ಸಚಿವಾಲಯ): 05 ಹುದ್ದೆಗಳು (RPC)
ಶಾಖಾಧಿಕಾರಿ (KPSC): 04 ಹುದ್ದೆಗಳು (RPC- 3, HK- 1)
ಸಹಾಯಕ ನಿರ್ದೇಶಕರು (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ): 04 ಹುದ್ದೆಗಳು (RPC- 2, HK- 2)
ಉದ್ಯೋಗಾಧಿಕಾರಿ: 03 ಹುದ್ದೆಗಳು (RPC)
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2026
ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 15-11-2026
ಅರ್ಹತೆಗಳು ಮತ್ತು ವಯೋಮಿತಿ
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ಸಹ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು.
ಸಾಮಾನ್ಯ ಅರ್ಹತೆ (GM): ಗರಿಷ್ಠ 40 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ: ಗರಿಷ್ಠ 43 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1: ಗರಿಷ್ಠ 45 ವರ್ಷಗಳು (ವಿಶೇಷ ಸೂಚನೆ: ಸರ್ಕಾರದ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ).
ಪರೀಕ್ಷೆಯ ಪ್ರಯತ್ನಗಳು (Attempts)
ಸಾಮಾನ್ಯ ಅರ್ಹತೆ (GM): 05 ಪ್ರಯತ್ನಗಳು
ಹಿಂದುಳಿದ ವರ್ಗಗಳು (2A, 2B, 3A, 3B, Cat-1): 07 ಪ್ರಯತ್ನಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST): ಪ್ರಯತ್ನಗಳ ಮಿತಿ ಇರುವುದಿಲ್ಲ
ಪರೀಕ್ಷಾ ವಿಧಾನ ಮತ್ತು ಶುಲ್ಕ
ನೇಮಕಾತಿಯು ಎರಡು ಹಂತಗಳಲ್ಲಿ ನಡೆಯಲಿದೆ:
ಪೂರ್ವಭಾವಿ ಪರೀಕ್ಷೆ: ವಸ್ತುನಿಷ್ಠ (MCQ) ಮಾದರಿಯ 2 ಪತ್ರಿಕೆಗಳು. ಪ್ರತಿಯೊಂದು ಪತ್ರಿಕೆಯು 100 ಪ್ರಶ್ನೆಗಳು ಹಾಗೂ 200 ಅಂಕಗಳನ್ನು ಹೊಂದಿದ್ದು, ತಪ್ಪು ಉತ್ತರಗಳಿಗೆ 0.25 (1/4th) ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ.
ಮುಖ್ಯ ಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆ: ಮುಖ್ಯ ಪರೀಕ್ಷೆಯು ವಿವರಣಾತ್ಮಕ (Descriptive) ಮಾದರಿಯಲ್ಲಿದ್ದು ಒಟ್ಟು 1250 ಅಂಕಗಳನ್ನು ಹೊಂದಿರುತ್ತದೆ. ಅರ್ಹತಾದಾಯಕ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಕನಿಷ್ಠ ಶೇ. 35 ಅಂಕಗಳಿಸುವುದು ಕಡ್ಡಾಯ. ವ್ಯಕ್ತಿತ್ವ ಪರೀಕ್ಷೆಯು 25 ಅಂಕಗಳಿಗೆ ನಡೆಯಲಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ: ₹ 600
ಪ್ರವರ್ಗ 2ಎ, 2ಬಿ, 3ಎ, 3ಬಿ: ₹ 300
ಮಾಜಿ ಸೈನಿಕ: ₹ 50
SC/ST/Cat-1/ವಿಕಲಚೇತನ ಅಭ್ಯರ್ಥಿಗಳಿಗೆ: ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಹ ಅಭ್ಯರ್ಥಿಗಳು KPSC ಅಧಿಕೃತ ವೆಬ್ಸೈಟ್ https://kpsconline.karnataka.gov.in , https://kpsconline.karnataka.gov.in ಮೂಲಕ OTR (One Time Registration) ಸೃಷ್ಟಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಕೆಪಿಎಸ್ಸಿ ಸಹಾಯವಾಣಿ ಸಂಖ್ಯೆಗಳನ್ನು (080-30574957 / 30574901) ಸಂಪರ್ಕಿಸಬಹುದು.

