- ಆಯೋಜಕರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ-ಬೆಂಗಳೂರು ಹಾಗೂ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ದೆಹಲಿ
. - ಘೋಷವಾಕ್ಯ: "ಮಕ್ಕಳನ್ನು ರಕ್ಷಿಸಿ, ಸಮಾಜವನ್ನು ಉಳಿಸಿ!" ಮತ್ತು "ಜಾಗೃತ ಯುವಜನತೆ - ಆರೋಗ್ಯವಂತ ಭಾರತ"
. - ಉದ್ದೇಶ: ಮಾದಕ ದ್ರವ್ಯಗಳ ವಿರುದ್ಧ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು, ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುವುದು
.
ನವೆಂಬರ್ 13, 2026
ಬೆಂಗಳೂರು:
ಇಂದು (ದಿನಾಂಕ: 14-11-2026, ಶನಿವಾರ) ಬೆಳಿಗ್ಗೆ 8:00 ಗಂಟೆಗೆ ಹೈಕೋರ್ಟ್ ಆವರಣ, ಬೆಂಗಳೂರು ಇಲ್ಲಿ “ಮಾದಕ ದ್ರವ್ಯಮುಕ್ತ ಸಮಾಜ – ನಮ್ಮ ಸಂಕಲ್ಪ” ಎಂಬ ಧ್ಯೇಯವಾಕ್ಯದೊಂದಿಗೆ 12 ರಿಂದ 18 ವರ್ಷದ ಮಕ್ಕಳಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮ ಹಾಗೂ 'Run Against Drugs' ಮ್ಯಾರಥಾನ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು .
ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು:
ಮಾದಕ ದ್ರವ್ಯಗಳ ವಿರುದ್ಧ ಎಲ್ಲರೂ ಒಗ್ಗೂಡಿ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಯಿತು . ಹೈಕೋರ್ಟ್ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು .
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

