ನವೆಂಬರ್ 05, 2026
ಕರುನಾಡ ಬಲ ನ್ಯೂಸ್ ವಿಶೇಷ ವರದಿ:
ಸೇಡಂ ತಾಲೂಕಿನ ಮಳಖೇಡದಲ್ಲಿ ಬೆಚ್ಚಿಬೀಳಿಸುವ ಘಟನೆ: ಪತಿ ಕೊಲೆಗೆ ಪತ್ನಿಯೇ ಸುಪಾರಿ? ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿರುವ ಶಂಕೆ!
ಕಲಬುರಗಿ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ನೈತಿಕತೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ದಾರುಣ ಘಟನೆಯೊಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಬೆಳಕಿಗೆ ಬಂದಿದೆ . ಅಕ್ರಮ ಸಂಬಂಧದ ವಿಚಾರವಾಗಿ ನಡೆದ ವಿಕೋಪವೊಂದು ಅಮಾಯಕ ಜೀವವೊಂದರ ಬಲಿ ಪಡೆದಿರುವ ಶಂಕೆ ವ್ಯಕ್ತವಾಗಿದೆ .
ಘಟನೆಯ ವಿವರ:
ಮಳಖೇಡದಲ್ಲಿ 'ಶ್ರೀರಾಮ ಕಂಪ್ಯೂಟರ್ ಸೆಂಟರ್' ನಡೆಸುತ್ತಾ ಸ್ವಾವಲಂಬನೆಯ ಬದುಕು ನಡೆಸುತ್ತಿದ್ದ ಸಿದ್ದರಾಮು ಮಾದಗಿ ಪಾಟೀಲ್ ಎಂಬುವವರ ಶವ ಮಂಗಳವಾರ ಬೆಳಿಗ್ಗೆ ಅವರದೇ ಮನೆಯಲ್ಲಿ ರಕ್ತಸಿಕ್ತವಾಗಿ ಹಾಗೂ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ . ಮೃತನ ಮೈಮೇಲೆ ಗಾಯದ ಗುರುತುಗಳು ಸ್ಪಷ್ಟವಾಗಿ ಕಂಡುಬಂದಿದ್ದರಿಂದ, ಇದು ಸಹಜ ಸಾವಲ್ಲ ಕೊಲೆ ಎಂಬ ಸಂಶಯ ಸ್ಥಳೀಯರಲ್ಲಿ ಹಾಗೂ ಪೊಲೀಸರಲ್ಲಿ ಮೂಡಿತು .
ಪೊಲೀಸ್ ತನಿಖೆಯಲ್ಲಿ ಬಯಲಾದ ಕರಾಳ ಸತ್ಯ:
ಪ್ರಕರಣದ ಗಂಭೀರತೆಯನ್ನು ಅರಿತು ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ ಕೆಲವು ಆಘಾತಕಾರಿ ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ . ಮೂಲಗಳ ಪ್ರಕಾರ, ಮೃತ ಸಿದ್ದರಾಮು ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರ ಅನ್ಯೋನ್ಯವಾಗಿದ್ದುದನ್ನು ಕಣ್ಣಾರೆ ನೋಡಿದ್ದನು . ಈ ಅಕ್ರಮ ಸಂಬಂಧದ ವಿಚಾರವು ಹೊರಬರುತ್ತದೆ ಮತ್ತು ಊರಿನಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಅಂಜಿಕೆಯಿಂದ, ತನ್ನದೇ ಪತಿ ಎಂಬ ಕನಿಷ್ಠ ಕರುಣೆಯೂ ಇಲ್ಲದೆ ಪತ್ನಿಯೇ ಪ್ರಿಯಕರನ ಜೊತೆ ಕೈಜೋಡಿಸಿ ಈ ಕರಾಳ ಕೃತ್ಯಕ್ಕೆ ಸಂಚು ರೂಪಿಸಿರುವ ಶಂಕೆ ಬಲವಾಗಿ ಕೇಳಿಬಂದಿದೆ .
ಕುಟುಂಬದ ನಂಬಿಕೆಯನ್ನು ಮುರಿಯAತೆ ಮಾಡಿರುವ ಈ ಅಮಾನವೀಯ ಕೃತ್ಯವು ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದು, ನಿಜವಾದ ಆರೋಪಿಗಳನ್ನು ಶೀಘ್ರದಲ್ಲೇ ಕಾನೂನಿನ ಕಟಕಟೆಗೆ ತರುವುದಾಗಿ ತಿಳಿಸಿದ್ದಾರೆ .
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

