ಬೆಂಗಳೂರು: ಅಕ್ಟೋಬರ್ 10, 2026 ರಂದು ಬೆಂಗಳೂರು ಉತ್ತರ ಮಾಗಡಿ ರಸ್ತೆಯಲ್ಲಿರುವ ಗಾಂಧಿ ಓಲ್ಡ್ ಏಜ್ ಹೋಮ್ನಲ್ಲಿ "ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ"ದ ಕುರಿತು ವಿಶೇಷ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು. ಅದೇ ದಿನದಂದು "ವಿಶ್ವ ಮಾನಸಿಕ ಆರೋಗ್ಯ ದಿನ" ಆಚರಿಸಲಾಗಿದ್ದು, ಈ ಮಹತ್ವದ ದಿನದಂದೇ ಹಿರಿಯ ನಾಗರಿಕರಿಗಾಗಿ ಈ ಸದುದ್ದೇಶದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯಾಂಶಗಳು:
- ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿರ್ವಹಣೆ: DLSA ಹಾಗೂ NMT ರಿಸೋರ್ಸ್ ಪೆರ್ಸನ್ಸ್ ಅವರು ಹಿರಿಯ ನಾಗರಿಕರಿಗೆ ನಿರ್ದಿಷ್ಟ ಚಟುವಟಿಕೆಗಳ ಜೊತೆಗೆ ಒತ್ತಡ ನಿರ್ವಹಣೆ, ವ್ಯಕ್ತಿಕ ಮಟ್ಟದಲ್ಲಿ ಗಮನಿಸಬೇಕಾದ ಕೆಲವು ಅಂಶಗಳು ಹಾಗೂ ಮಾನಸಿಕವಾಗಿ ಸದೃಢರಾಗುವುದು ಹೇಗೆ ಎಂಬ ಬಗ್ಗೆ ಅನೇಕ ಉಪಯುಕ್ತ ವಿಷಯಗಳನ್ನು ಹಿರಿಯ ನಾಗರಿಕರೊಂದಿಗೆ ಹಂಚಿಕೊಂಡರು.
- ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ: ಲಯನ್ಸ್ ಕ್ಲಬ್ ಆಸರೆ (Lions Club Aasare) ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ, ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
- ವಿಶೇಷ ಆಹ್ವಾನಿತರ ಸ್ಪೂರ್ತಿದಾಯಕ ನುಡಿಗಳು: 'Shy To Shyless' ಸಂಸ್ಥೆಯ ಕೋ-ಫೌಂಡರ್ ಶ್ರೀ ರಮೇಶ್ ಕೃಷ್ಣಪ್ಪನವರು ಹಿರಿಯರನ್ನು ಕುರಿತು ಮಾತನಾಡುತ್ತಾ ಅವರನ್ನು ಪ್ರೀತಿಯಿಂದ ಹುರಿದುಂಬಿಸಿದರು.
ಗಣ್ಯರ ಉಪಸ್ಥಿತಿ:
ಈ ಕಾರ್ಯಕ್ರಮದಲ್ಲಿ ಗಾಂಧಿ ಓಲ್ಡ್ ಏಜ್ ಹೋಮ್ ಸಂಸ್ಥಾಪಕ ಶ್ರೀ ಉಗ್ರಯ್ಯ, ಲಯನ್ಸ್ ಕ್ಲಬ್ ಆಸರೆ ವತಿಯಿಂದ ಶ್ರೀ ಕೃಷ್ಣಮೂರ್ತಿ, NMT ವತಿಯಿಂದ ಮಿಸ್ ಸಿರಿಷಾ, Shy To Shyless ವತಿಯಿಂದ ಶ್ರೀ ರಮೇಶ್ ಕೃಷ್ಣಪ್ಪ ಹಾಗೂ DLSA ವತಿಯಿಂದ PLV ಶ್ರೀ ವಿದ್ಯಾಶಂಕರ್ ಮತ್ತು ಇತರರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಒಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ಮಂದಿ ಹಿರಿಯ ನಾಗರಿಕರು ಉಪಸ್ಥಿತರಿದ್ದು ಸದುಪಯೋಗ ಪಡಿಸಿಕೊಂಡರು. ಒಟ್ಟಾರೆಯಾಗಿ ಎಲ್ಲರೂ ಒಂದಾಗಿ ಸೇರಿ ಬಹಳ ಸುಂದರವಾದ ಹಾಗೂ ಯಶಸ್ವಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.
- ವರದಿ: ಕರುನಾಡ ಬಲ ನ್ಯೂಸ್

