ಕರುನಾಡ ಬಲ ನ್ಯೂಸ್ ವರದಿ
ಆಧಾರ್ ಕಾರ್ಡ್ನಲ್ಲಿ 5 ಹೊಸ ನಿಯಮಗಳು ಜಾರಿ: ಕನ್ನಡದಲ್ಲೇ ವೆಬ್ಸೈಟ್ ಸೇವೆ ಸೇರಿದಂತೆ ಮಹತ್ವದ ಬದಲಾವಣೆ!
ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರವು ಪ್ರಮುಖ ಹೊಸ ನಿಯಮಗಳು ಹಾಗೂ ಬದಲಾವಣೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಲವಾರು ಸೌಲಭ್ಯಗಳನ್ನು ಪರಿಚಯಿಸಲಾಗಿದೆ.
ಆಧಾರ್ ಕಾರ್ಡ್ನಲ್ಲಿ ಜಾರಿಗೆ ಬಂದ 5 ಪ್ರಮುಖ ಬದಲಾವಣೆಗಳು:
ರೇಷನ್ ಅಂಗಡಿಯಲ್ಲಿ ಫೇಸ್ ಸ್ಕ್ಯಾನ್: ಪಡಿತರ ವಿತರಣೆಯಲ್ಲಿ ಸುಧಾರಣೆ ತರಲು ರೇಷನ್ ಅಂಗಡಿಗಳಲ್ಲಿ ಮುಖದ ಗುರುತು (ಫೇಸ್ ಸ್ಕ್ಯಾನ್) ಪದ್ಧತಿ ಜಾರಿಗೆ ಬಂದಿದೆ.
ಡಿಜಿಟಲ್ ಟೋಕನ್ ಸಿಸ್ಟಮ್ ಜಾರಿ: ಸಾರ್ವಜನಿಕರಿಗೆ ಸೇವೆಗಳು ಸುಲಭವಾಗಿ ದೊರೆಯಲು ಡಿಜಿಟಲ್ ಟೋಕನ್ ವ್ಯವಸ್ಥೆಯನ್ನು ತರಲಾಗಿದೆ.
ಕನ್ನಡ ಸೇರಿದಂತೆ 23 ಭಾಷೆಗಳಲ್ಲಿ ಆಧಾರ್ ವೆಬ್ಸೈಟ್: ಈಗ ಕನ್ನಡ ಸೇರಿದಂತೆ ಒಟ್ಟು 23 ಪ್ರಾದೇಶಿಕ ಭಾಷೆಗಳಲ್ಲಿ ಆಧಾರ್ ವೆಬ್ಸೈಟ್ ಸೇವೆ ಲಭ್ಯವಿರುತ್ತದೆ.
NGOಗಳಿಗೆ SWIK 2.0 ಪೋರ್ಟಲ್: ಸ್ವಯಂ ಸೇವಾ ಸಂಸ್ಥೆಗಳ (NGO) ಕಾರ್ಯಗಳಿಗೆ ಅನುಕೂಲವಾಗಲು SWIK 2.0 ಪೋರ್ಟಲ್ ಆರಂಭಿಸಲಾಗಿದೆ.
ಸಣ್ಣ ಸ್ಟಾರ್ಟ್ಅಪ್ಗಳಿಗೆ ಲೈಟ್ ಫ್ರೇಮ್ವರ್ಕ್: ನವೋದ್ಯಮಗಳು ಮತ್ತು ಸಣ್ಣ ಸ್ಟಾರ್ಟ್ಅಪ್ಗಳಿಗೆ ಬೆಂಬಲ ನೀಡಲು ಲೈಟ್ ಫ್ರೇಮ್ವರ್ಕ್ ಅನ್ನು ಪರಿಚಯಿಸಲಾಗಿದೆ.
ವಿಶೇಷ ಸೌಲಭ್ಯಗಳು ಮತ್ತು ಪರಿಹಾರ: