- ವಿಸ್ತೃತ ಸಮಯ: ದಿನನಿತ್ಯ ಬೆಳಿಗ್ಗೆ 9:00 ರಿಂದ ರಾತ್ರಿ 10:00 ರವರೆಗೆ ಸಾರ್ವಜನಿಕರಿಗೆ ಪಡಿತರ ಸಾಮಗ್ರಿ ಲಭ್ಯವಾಗಲಿದೆ.
- ದೈನಂದಿನ ಕೂಲಿ ಕಾರ್ಮಿಕರಿಗೆ ಅನುಕೂಲ: ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್ ನೌಕರರು ಪಡಿತರ ಪಡೆಯಲು ಅನುಭವಿಸುತ್ತಿದ್ದ ತೊಂದರೆಗೆ ಈ ನಿರ್ಧಾರದಿಂದ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
- ಸರ್ತಿ ಸಾಲಿಗೆ ಮುಕ್ತಿ: ಕೆಲಸದ ಅವಧಿ ಹೆಚ್ಚಿರುವುದರಿಂದ ಅಂಗಡಿಗಳ ಮುಂದೆ ಸಾರ್ವಜನಿಕರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.
ಸೆಪ್ಟೆಂಬರ್ 01, 2026
ನ್ಯಾಯಬೆಲೆ ಅಂಗಡಿಗಳ ಕೆಲಸದ ಅವಧಿ ವಿಸ್ತರಣೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಬೆಂಗಳೂರು:
ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ನ್ಯಾಯಬೆಲೆ (ಆರ್ಟಿಎಸ್/ಪಿಡಿಎಸ್) ಅಂಗಡಿಗಳ ಕಾರ್ಯನಿರ್ವಹಣಾ ಸಮಯವನ್ನು ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಇನ್ನು ಮುಂದೆ ರಾಜ್ಯಾದ್ಯಂತ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಿಗ್ಗೆ 9:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ತೆರೆದಿರಲಿವೆ.
ಆದೇಶದ ಮುಖ್ಯ ಅಂಶಗಳು:
ಕರ್ನಾಟಕ ಬಲ ನ್ಯೂಸ್ ವಿಶೇಷ ನೋಟ:
ಸರ್ಕಾರದ ಈ ನಿರ್ಧಾರವನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಸಾರ್ವಜನಿಕರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ. ಆದರೆ, ಬಯೋಮೆಟ್ರಿಕ್ ವ್ಯವಸ್ಥೆಯ ತಾಂತ್ರಿಕ ದೋಷಗಳು ಹಾಗೂ ನೆಟ್ವರ್ಕ್ ಸಮಸ್ಯೆಗಳನ್ನು ಸರಿಪಡಿಸಿದರೆ ಮಾತ್ರ ಈ ಸುದೀರ್ಘ ಅವಧಿಯ ಸೌಲಭ್ಯ ಪೂರ್ಣಪ್ರಮಾಣದಲ್ಲಿ ಜನರಿಗೆ ತಲುಪಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಅಂಗಡಿಗಳನ್ನು ತೆರೆಯುವಂತೆ ಖಾತರಿಪಡಿಸಿಕೊಳ್ಳಲು ಸೂಕ್ತ ಮೇಲ್ವಿಚಾರಣೆ ನಡೆಸುವುದಾಗಿ ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

