ಸೆಪ್ಟೆಂಬರ್ 07, 2026
ಕೆಂಪೇಗೌಡ ಬಸ್ ನಿಲ್ದಾಣ ವಾರ್ಡ್ ನಂ 4 ರಲ್ಲಿ ಅವಘಡ - ಬಸ್ ಹತ್ತುವಾಗ ವೃದ್ಧ ಪತನ, ಕಾಲಿಗೆ ತೀವ್ರ ಗಾಯ*
*ಬೆಂಗಳೂರು:* ಮೆಜೆಸ್ಟಿಕ್ ಬಸ್ ನಿಲ್ದಾಣದ 4 ನೇ ನಂಬರ್ ಫ್ಲಾಟ್ಫಾರ್ಮ್ ನಲ್ಲಿ ಇಂದು ಸಂಜೆ ಜನಸಂದಣಿ ವಿಪರೀತವಾಗಿತ್ತು. ಬಸ್ ಹತ್ತುವ ವೇಳೆ ತಳ್ಳಾಟ ನೂಕಾಟದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ಅವರ ಕಾಲಿಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಅವರಿಗೆ ನೆರವಾದರು.
ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಂಜೆ ವೇಳೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಅಥವಾ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಈ ಅವಘಡಕ್ಕೆ ಕಾರಣವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ ಅಧಿಕಾರಿಗಳು ಕೂಡಲೇ ವಾರ್ಡ್ ನಂ 4 ರಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಹಿರಿಯ ನಾಗರಿಕರಿಗೆ ಆದ್ಯತೆ ನೀಡಬೇಕು ಮತ್ತು ಜನದಟ್ಟಣೆ ನಿಯಂತ್ರಿಸಬೇಕು ಎಂದು ಸಾರ್ವಜನಿಕರ ಒತ್ತಾಯ.
*ವರದಿ: ಶ್ರೀ ದೇವರಾಜ - ಕುವೆಂಪು ನಗರ ವಾರ್ಡ್ ಅಧ್ಯಕ್ಷರು, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆ - HQ ದೆಹಲಿ | Mob: 8884522410*
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

