ಕರುನಾಡ ಬಲ ನ್ಯೂಸ್: ವಿಶೇಷ ವರದಿ
ಸಮಾಜಮುಖಿ ಸೇವೆ ಹಾಗೂ ವ್ಯಸನಮುಕ್ತಿ ಚಿಕಿತ್ಸೆಯಲ್ಲಿ 17 ವರ್ಷಗಳ ಅನುಭವ: ಕಾರುಣ್ಯ ಹೆಲ್ತ್ ಕೇರ್ ಸಂಸ್ಥಾಪಕ ಶ್ರೀ ಮಂಜುನಾಥ ಸಿ.ಎಸ್. ಅವರ ಸ್ಪೂರ್ತಿದಾಯಕ ಸೇವಾ ಪಯಣ
ಬೆಂಗಳೂರು: ಸಮಾಜದಲ್ಲಿ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯದ ಕುರಿತು ಜಾಗೃತಿ ಮೂಡಿಸುತ್ತಾ, ಸಂಕಷ್ಟದಲ್ಲಿರುವ ನೂರಾರು ಜೀವಗಳಿಗೆ ಹೊಸ ಜೀವನ ನೀಡುತ್ತಿರುವ ಕಾರುಣ್ಯ ಹೆಲ್ತ್ ಕೇರ್ (Kaarunya Health Care) ಸಂಸ್ಥೆಯ ಸಂಸ್ಥಾಪಕ ಶ್ರೀ ಮಂಜುನಾಥ ಸಿ.ಎಸ್. ಅವರು ಕಳೆದ 17 ವರ್ಷಗಳಿಂದಲೂ ದಣಿವರಿಯದೆ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಮತ್ತು ಮಾನಸಿಕ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ (MSW - Medical and Psychiatric Social Work) ಪಡೆದಿರುವ ಇವರು, ಸಮುದಾಯ ಆರೋಗ್ಯ ಮತ್ತು ವ್ಯಸನಮುಕ್ತಿ (De-addiction) ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ.
ವಿಶೇಷ ವಿದ್ಯಾರ್ಹತೆ ಮತ್ತು ವೃತ್ತಿಪರ ಪರಿಣತಿ
ಶೈಕ್ಷಣಿಕ ಹಿನ್ನೆಲೆ: ವೈದ್ಯಕೀಯ ಮತ್ತು ಮಾನಸಿಕ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ (MSW).
ಹೆಚ್ಚುವರಿ ಕೌಶಲ್ಯ: ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDHRM) ಪಡೆದಿರುವುದು ಸಾಂಸ್ಥಿಕ ಅಭಿವೃದ್ಧಿ ಹಾಗೂ ಉದ್ಯೋಗಿಗಳ ಸ್ವಾಸ್ಥ್ಯ ಉಪಕ್ರಮಗಳಿಗೆ ಹೆಚ್ಚು ಸಹಕಾರಿಯಾಗಿದೆ.
ಚಿಕಿತ್ಸಕ ನೈಪುಣ್ಯತೆ: ಕ್ಲಿನಿಕಲ್ ಹಿಪ್ನೋಥೆರಪಿಯಲ್ಲಿ (Clinical Hypnotherapy) ಪ್ರಮಾಣಪತ್ರ ಕೋರ್ಸ್ ಪೂರ್ಣಗೊಳಿಸಿದ್ದು, ವರ್ತನಾ ಬದಲಾವಣೆ, ವ್ಯಸನ ಚೇತರಿಕೆ ಮತ್ತು ಮಾನಸಿಕ ಬೆಂಬಲ ನೀಡುವಲ್ಲಿ ಉನ್ನತ ಪರಿಣತಿ ಹೊಂದಿದ್ದಾರೆ.
ಸಮಾಜಕ್ಕೆ ನಿರಂತರ ಕೊಡುಗೆ
ಶ್ರೀ ಮಂಜುನಾಥ ಸಿ.ಎಸ್. ಅವರು ವ್ಯಸನಮುಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ, ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಮೂಲಕ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ವೈಯಕ್ತಿಕ ಚಿಕಿತ್ಸೆಗಷ್ಟೇ ಸೀಮಿತವಾಗದೆ, ಸಮಾಜದಲ್ಲಿ ಆರೋಗ್ಯ ಜಾಗೃತಿ ಹಾಗೂ ವಿವಿಧ ಸಮುದಾಯ ಸೇವಾ ಕಾರ್ಯಕ್ರಮಗಳ ಮುಖಾಂತರ ಅನೇಕರಿಗೆ ಆಸರೆಯಾಗಿದ್ದಾರೆ.
ಮುಂದಿನ ಹೆಜ್ಜೆ ಅಭಯ ಆಶ್ರಮ
ಕರುಣೆ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಕಾರುಣ್ಯ ಹೆಲ್ತ್ ಕೇರ್ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಇವರ ನಿಸ್ವಾರ್ಥ ಸೇವೆಗೆ ಸ್ಥಳೀಯ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಕರುನಾಡ ಬಲ ನ್ಯೂಸ್ ತಂಡ.