ಆಗಸ್ಟ್ 17, 2026
ಬೆಂಗಳೂರು:
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ಬೆಂಗಳೂರು ನಗರ ಜಿಲ್ಲೆ) 2026-27ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ಕಾನೂನು ಪದವೀಧರರಿಂದ ವಕೀಲ ವೃತ್ತಿ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ₹5,000/- ಶಿಷ್ಯವೇತನ ದೊರೆಯಲಿದೆ.
📌 ಅರ್ಹತೆಗಳು ಮತ್ತು ಪ್ರಮುಖ ಷರತ್ತುಗಳು:
ಸಮುದಾಯ: ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯದ ಅಭ್ಯರ್ಥಿಗಳು ಅರ್ಹರು.
ಶೈಕ್ಷಣಿಕ ಅರ್ಹತೆ: ವಕೀಲ ವೃತ್ತಿಯ ತರಬೇತಿ ಪಡೆಯುತ್ತಿರುವ ಕಾನೂನು ಪದವೀಧರರಾಗಿರಬೇಕು.
ಶಿಷ್ಯವೇತನ: ತಿಂಗಳಿಗೆ ₹5,000/-
ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ಗರಿಷ್ಠ ₹3,50,000/- ಇರಬೇಕು.
ಅನುಭವ/ಅವಧಿ: ಕಾನೂನು ಪದವಿ ಪೂರ್ಣಗೊಳಿಸಿ 2 ವರ್ಷ ಮೀರಿರಬಾರದು.
ವಯೋಮಿತಿ: ಅರ್ಜಿ ಸಲ್ಲಿಸುವ ದಿನಾಂಕದಂದು 38 ವರ್ಷ ಮೀರಿರಬಾರದು.
ನೋಂದಣಿ: ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಕಡ್ಡಾಯವಾಗಿದೆ.
📄 ಅಗತ್ಯ ದಾಖಲೆಗಳು:
ಕಾನೂನು ಪದವಿ ಪ್ರಮಾಣಪತ್ರ & ಅಂಕಪಟ್ಟಿ
SSLC / TC
ಜಾತಿ ಮತ್ತು ಆದಾಯ ಪ್ರಮಾಣಪತ್ರ
ವಾಸಸ್ಥಳದ ಪ್ರಮಾಣಪತ್ರ
⏰ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಸಮಯ: 11/09/2026 (ಸಂಜೆ 5:30 ರವರೆಗೆ)
📍 ಅರ್ಜಿ ಸಲ್ಲಿಸುವ ಸ್ಥಳ:
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,
ಬೆಂಗಳೂರು ನಗರ ಜಿಲ್ಲೆ, 1ನೇ ಮಹಡಿ, ಪೋಡಿಯಂ ಬ್ಲಾಕ್,
ವಿ.ವಿ. ಗೋಪುರ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು – 560001.
📞 ದೂರವಾಣಿ: 080-22866718
🌐 ವೆಬ್ಸೈಟ್: www.gokdom.kar.nic.in
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಬೆಂಗಳೂರು ಉತ್ತರ: 8310935776
ಬೆಂಗಳೂರು ಪೂರ್ವ: 9663329597
ಆನೇಕಲ್: 9481048859
ಬೆಂಗಳೂರು ದಕ್ಷಿಣ: 9590493282
ಕರುನಾಡ ಬಲ ನ್ಯೂಸ್ ವರದಿ — ಅರ್ಹ ಕಾನೂನು ಪದವೀಧರರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

