ಆಗಸ್ಟ್ 11, 2026
ಬೆಂಗಳೂರು: ಆಗಸ್ಟ್ 15ರ ಭಾರತದ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವರುಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಟಾಚಾರ) ವತಿಯಿಂದ ದಿನಾಂಕ 11.08.2026 ರಂದು ಈ ಮಹತ್ವದ ಆದೇಶ ಹೊರಬಿದ್ದಿದ್ದು, ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಚಿವರನ್ನು ನಿಯೋಜಿಸಲಾಗಿದೆ.
ಯಾವ ಜಿಲ್ಲೆಯಲ್ಲಿ ಯಾರಿಗೆ ಧ್ವಜಾರೋಹಣದ ಜವಾಬ್ದಾರಿ? (ಪ್ರಮುಖ ವಿವರಗಳು):
ತುಮಕೂರು: ಡಾ. ಜಿ. ಪರಮೇಶ್ವರ್ (ಮಾನ್ಯ ಉಪ ಮುಖ್ಯಮಂತ್ರಿಯವರು ಹಾಗೂ ಕಂದಾಯ ಸಚಿವರು)
ಬೆಂಗಳೂರು ಗ್ರಾಮಾಂತರ: ಶ್ರೀ ಕೆ.ಹೆಚ್. ಮುನಿಯಪ್ಪ (ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು)
ಚಿಕ್ಕಮಗಳೂರು: ಶ್ರೀ ಕೆ.ಜೆ. ಜಾರ್ಜ್ (ಇಂಧನ ಸಚಿವರು)
ವಿಜಯಪುರ: ಶ್ರೀ ಎಂ. ಬಿ. ಪಾಟೀಲ್ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು)
ಕೋಲಾರ: ಶ್ರೀ ರಾಮಲಿಂಗಾರೆಡ್ಡಿ (ಭಾರಿ ಹಾಗೂ ಸಣ್ಣ ನೀರಾವರಿ ಸಚಿವರು)
ಬೆಳಗಾವಿ: ಶ್ರೀ ಸತೀಶ್ ಜಾರಕಿಹೊಳಿ (ಲೋಕೋಪಯೋಗಿ ಸಚಿವರು)
ಕಲಬುರಗಿ: ಶ್ರೀ ಪ್ರಿಯಾಂಕ್ ಖರ್ಗೆ (ಗೃಹ ಸಚಿವರು)
ದಕ್ಷಿಣ ಕನ್ನಡ: ಶ್ರೀ ಯು.ಟಿ. ಖಾದರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)
ಮೈಸೂರು: ಡಾ. ಯತೀಂದ್ರ ಸಿದ್ದರಾಮಯ್ಯ (ನಗರಾಭಿವೃದ್ಧಿ ಸಚಿವರು)
ಧಾರವಾಡ: ಶ್ರೀ ಸಂತೋಷ್ ಎಸ್. ಲಾಡ್
ಹಾಸನ: ಶ್ರೀ ಕೆ.ಎಂ. ಶಿವಲಿಂಗೇಗೌಡ
ಕೊಪ್ಪಳ: ಶ್ರೀ ತಂಗಡಗಿ ಶಿವರಾಜ್ ಸಂಗಪ್ಪ
ವಿಜಯನಗರ: ಶ್ರೀ ಬಿ. ಝಡ್. ಜಮೀರ್ ಅಹಮದ್ ಖಾನ್
ಉಡುಪಿ: ಶ್ರೀ ಬಸವಂತಪ್ಪ
(ಉಳಿದಂತೆ ಒಟ್ಟು 30 ಜಿಲ್ಲಾ ಕೇಂದ್ರಗಳಿಗೂ ಸಚಿವರನ್ನು ನೇಮಕ ಮಾಡಲಾಗಿದೆ).
ಅಧಿಕೃತ ಆದೇಶದಲ್ಲೇನಿದೆ?
ಒಂದು ವೇಳೆ ಅನಾರೋಗ್ಯ ಅಥವಾ ಇತರೆ ಅನಿವಾರ್ಯ ಕಾರಣಗಳಿಂದಾಗಿ ಸಂಬಂಧಪಟ್ಟ ಮಾನ್ಯ ಸಚಿವರುಗಳು ನಿಗದಿತ ಜಿಲ್ಲಾ ಕೇಂದ್ರದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅನುಪಸ್ಥಿತರಾದಲ್ಲಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು (DC) ಧ್ವಜಾರೋಹಣವನ್ನು ನೆರವೇರಿಸತಕ್ಕದ್ದು ಎಂದು ಸರ್ಕಾರದ ವಿಶೇಷ ಕಾರ್ಯದರ್ಶಿ (ರಾಜ್ಯ ಶಿಷ್ಟಾಚಾರ) ವೀರಭದ್ರ ಹಂಚಿನಾಳ ಅವರು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯನ್ನು ಸಂಭ್ರಮದಿಂದ ಆಚರಿಸಲು ಎಲ್ಲಾ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.
- ಕರುನಾಡ ಬಲ ನ್ಯೂಸ್, ಬೆಂಗಳೂರು.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

