ಆಗಸ್ಟ್ 24, 2026
ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಚಾಲಕನೊಬ್ಬ ಬಸ್ ಚಾಲನೆ ಮಾಡುವಾಗಲೇ ಮಹಿಳಾ ಪ್ರಯಾಣಿಕರೊಬ್ಬರ ಕೈ ಹಿಡಿದುಕೊಂಡು ಚಾಲನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ.
ಘಟನೆಯ ವಿವರ:
ಮಾರ್ಗ ಮತ್ತು ಸಮಯ: ಈ ಘಟನೆಯು ಆಸ್ಟ್ 22, 2026 ರಂದು ಸಂಜೆ 5:00 ರಿಂದ 6:00 ಗಂಟೆಯ ಅವಧಿಯಲ್ಲಿ ನಡೆದಿದೆ ಎನ್ನಲಾಗಿದೆ.
ಬಸ್ ಮಾರ್ಗ: ಯಲಹಂಕದಿಂದ ದೀಪಾಂಜಲಿ ನಗರಕ್ಕೆ ಸಂಚರಿಸುವ 401E ಸಂಖ್ಯೆಯ ಬಿಎಂಟಿಸಿ ಬಸ್ನಲ್ಲಿ ಈ ಘಟನೆ ಸಂಭವಿಸಿದೆ.
ಚಾಲಕನ ಕೃತ್ಯ: ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನು ಪಕ್ಕದಲ್ಲಿದ್ದ ಮಹಿಳೆಯ ಕೈ ಹಿಡಿದುಕೊಂಡು ಚಾಲನೆ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಸಾರ್ವಜನಿಕರ ಆಕ್ರೋಶ:
ಬಿಎಂಟಿಸಿ ಬಸ್ನಲ್ಲಿ ನೂರಾರು ಪ್ರಯಾಣಿಕರ ಜೀವವನ್ನು ಕೈಯಲ್ಲಿಡಿದು ವಾಹನ ಚಲಾಯಿಸಬೇಕಾದ ಚಾಲಕ, ಈ ರೀತಿ ಗಮನವಿಟ್ಟು ಚಾಲನೆ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸಿರುವುದು ಸಾರ್ವಜನಿಕರು ಹಾಗೂ ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಲಕನ ಈ ನಿರ್ಲಕ್ಷ್ಯದಿಂದ ದೊಡ್ಡ ಪ್ರಮಾಣದ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಪ್ರಯಾಣಿಕರ ಸುರಕ್ಷತೆಯನ್ನು ಗಾಳಿಗೆ ತೂರಿದ ಈ ಚಾಲಕನ ವಿರುದ್ಧ ಬಿಎಂಟಿಸಿ ಹಿರಿಯ ಅಧಿಕಾರಿಗಳು ತಕ್ಷಣವೇ ಕಠಿಣ ಶಿಸ್ತುಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ಕರುನಾಡ ಬಲ ನ್ಯೂಸ್, ಬೆಂಗಳೂರು.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

