ಆಗಸ್ಟ್ 05, 2026
ಬೆಂಗಳೂರು: ರಾಜಧಾನಿಯನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಕ್ರಮ ಕೈಗೊಂಡಿದೆ. ನಗರದಲ್ಲಿರುವ ಎಲ್ಲಾ ಖಾಲಿ ನಿವೇಷನಗಳ ಮಾಲೀಕರು ತಮ್ಮ ಜಾಗದಲ್ಲಿ ಶೇಖರಣೆಯಾಗಿರುವ ತ್ಯಾಜ್ಯ ಹಾಗೂ ಡೆಬ್ರಿಸ್ (ಕಸ/ಕಟ್ಟಡ ತ್ಯಾಜ್ಯ) ಅನ್ನು ಆಗಸ್ಟ್ 15, 2026 ರೊಳಗೆ ತಪ್ಪದೇ ಸ್ವಚ್ಛಗೊಳಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಸೂಚನೆಗಳು ಮತ್ತು ಪ್ರಮುಖ ಅಂಶಗಳು:
ಆಗಸ್ಟ್ 15 ಕೊನೆಯ ದಿನಾಂಕ: ನಗರದಲ್ಲಿರುವ ಪ್ರತಿಯೊಬ್ಬ ಖಾಲಿ ನಿವೇಷನದ ಮಾಲೀಕರು ಆಗಸ್ಟ್ 15ರ ಒಳಗಾಗಿ ತಮ್ಮ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
ದಂಡದ ವಿವರ:
ಮೊದಲ ಉಲ್ಲಂಘನೆಗೆ: ₹25,000 ದಂಡ.
ನಂತರದ ಉಲ್ಲಂಘನೆಗಳಿಗೆ: ₹50,000 ದಿಂದ ₹1,00,000 ವರೆಗೆ ಭಾರಿ ದಂಡ ವಿಧಿಸಲಾಗುವುದು.
ಕಟ್ಟುನಿಟ್ಟಿನ ಕ್ರಮ: ಜಾಗ ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯಿಂದಲೇ ತ್ಯಾಜ್ಯ ತೆರವುಗೊಳಿಸಿ ಆ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಅಥವಾ 'ಕರ್ನಾಟಕ ಭೂ ಕಂದಾಯ ಕಾಯ್ದೆ 1964' ರ ಅನ್ವಯ ವಸೂಲಿ ಮಾಡಲಾಗುತ್ತದೆ.
ಮಾಹಿತಿ ಹಂಚಿಕೊಳ್ಳಿ: ಸ್ವಚ್ಛಗೊಳಿಸಿದ ನಂತರ ಜಾಗದ ವಿವರಗಳನ್ನು GPS ಸ್ಥಳಾಂಕಗಳೊಂದಿಗೆ (GPS Coordinates) +91 94481 97197 ವಾಟ್ಸಾಪ್ ಸಂಖ್ಯೆಗೆ ಕಳುಹಿಸಲು ತಿಳಿಸಲಾಗಿದೆ. ದೂರುದಾರರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ.
ಸುರಕ್ಷತಾ ಕ್ರಮಗಳು: ಜಾಗವನ್ನು ಸ್ವಚ್ಛಗೊಳಿಸಿದ ಬಳಿಕ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಂಡು, ಅನಧಿಕೃತ ತ್ಯಾಜ್ಯ ವಿಲೇವಾರಿಯಾಗದಂತೆ ತಡೆಯಲು ಮಾಲೀಕರಿಗೆ ಸೂಚಿಸಲಾಗಿದೆ.
ಸಹಾಯವಾಣಿ ಸಂಪರ್ಕಗಳು:
ಟೋಲ್ ಫ್ರೀ ಸಹಾಯವಾಣಿ: 1533
ಲ್ಯಾಂಡ್ಲೈನ್: 080-2222 1188
ಇಮೇಲ್: gbachiefcommissioner@gmail.com
"ತ್ಯಾಜ್ಯದಿಂದ ಸ್ವಾತಂತ್ರ್ಯ - ನಮ್ಮ ನಗರ, ನಮ್ಮ ಜವಾಬ್ದಾರಿ" ಎಂಬ ಅಭಿಯಾನಕ್ಕೆ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ, ಬೆಂಗಳೂರನ್ನು ಸ್ವಚ್ಛವಾಗಿಡಲು ಸಹಕರಿಸಬೇಕಾಗಿ ಪ್ರಾಧಿಕಾರ ವಿನಂತಿಸಿದೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

