(ಕಮತಗಿ):
ಪಟ್ಟಣದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತ ನಾಗರಿಕ ಸೇವಾ ಕೇಂದ್ರಗಳ ಸಂಘ (ರಿ.) ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕ ರಾಜ್ಯ ಉದ್ಯಮಿಗಳ ಅಭಿವೃದ್ಧಿ ಸಮಿತಿ ರಚನೆಯ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವು ಆಗಸ್ಟ್ 30ರಂದು ಬೆಳಿಗ್ಗೆ 10 ಗಂಟೆಗೆ ಕಮತಗಿಯ ಪಾರ್ವತಿ ಪರಮೇಶ್ವರ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ.
ದಿವ್ಯ ಸಾನಿಧ್ಯ ಹಾಗೂ ಉದ್ಘಾಟನೆ:
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೊಳಿ ಹುಚ್ಚೇಶ್ವರ ಸಂಸ್ಥಾನಮಠ, ಕಮತಗಿ-ಕೋಟೇಕಲ್ ಹುಚ್ಚೇಶ್ವರ ಶ್ರೀಗಳು ವಹಿಸಲಿದ್ದಾರೆ.
ಹಿರೇಮಠ ಕಮತಗಿ ಶಿವಕುಮಾರ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಉಮೇಶ ಹುಮೇಟಿ ನೆರವೇರಿಸಲಿದ್ದಾರೆ.
ಸಂಸದರಾದ ಪಿ. ಸಿ. ಗದ್ದಿಗೌಡರ ಅವರು ವೆಬ್ಸೈಟ್ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳು:
AICSCA CSC ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಸದಾಶಿವ ಕಡ್ಲಿಮಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ:
ರಮೇಶ ಬದ್ನೂರ (ಸಿಂಡಿಕೇಟ್ ಸದಸ್ಯರು, ಕರಾಕಾವಿವಿ ಸುತ್ತೂರು, ಹುಬ್ಬಳ್ಳಿ)
ಪ್ರಕಾಶ ಪವಾರ (ಅಧಿಕಾರಿಗಳು, ಜಿಲ್ಲಾ ಅಗ್ನಿಶಾಮಕ ದಳ, ಬಾಗಲಕೋಟೆ)
ಸಾಗರ ಆರ್. ಕಲಾಡಗಿ (ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟ)
ಮಹಾದೇವ ರಾವ್ ಸೂರ್ಯವಂಶಿ (ನಿಯೋಜಿತ ರಾಜ್ಯ ಗೌರವ ಅಧ್ಯಕ್ಷರು, ಕರ್ನಾಟಕ ರಾಜ್ಯ ಉದ್ಯಮಿಗಳ ಅಭಿವೃದ್ಧಿ ಸಮಿತಿ)
ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಹಾಗೂ ಪದಾಧಿಕಾರಿಗಳು ಭಾಗವಹಿಸುವಂತೆ ಸಂಸ್ಥಾಪಕರಾದ ಸದಾಶಿವ ಕಡ್ಲಿಮಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.